ವಿಟ್ಲ: ಟಿಪ್ಪರ್ ನಿಂದ ರಸ್ತೆಗೆ ಸೋರಿದ ಜಲ್ಲಿ ಕಲ್ಲಿನಿಂದಾಗಿ ಬೈಕ್ ಗಳು ಸ್ಕಿಡ್ ಆಗಿ ಸವಾರರಿಗೆ ತೊಂದರೆ ಉಂಟಾಗುತ್ತಿದ್ದ ಘಟನೆ ಕಂಬಳಬೆಟ್ಟುವಿನಲ್ಲಿ ನಡೆದಿದೆ.

ಟಿಪ್ಪರ್ ನಿಂದ ರಸ್ತೆಗೆ ಸೋರಿದ ಜಲ್ಲಿ ಕಲ್ಲಿನಿಂದಾಗಿ ಕಂಬಳಬೆಟ್ಟು ಸೇತುವೆಯಲ್ಲಿ ಬೈಕ್ ಗಳು ಸ್ಕಿಡ್ ಆಗುತ್ತಿದ್ದು, ನಾಲ್ಕಕ್ಕೂ ಹೆಚ್ಚು ಬೈಕ್ ಗಳು ಸ್ಕಿಡ್ ಆಗಿ ಸವಾರರಿಗೆ ತೊಂದರೆ ಉಂಟಾಗಿದೆ.

ಈ ಹಿನ್ನೆಲೆ ಕಂಬಳಬೆಟ್ಟು ಪಂಚಾಯತ್ ಸದಸ್ಯ ಸಿದ್ಧಿಕ್ ಹಾಗೂ ಎಸ್. ಡಿ. ಪಿ. ಐ ಕಾರ್ಯಕರ್ತರು ರಸ್ತೆಯಲ್ಲಿ ಬಿದ್ದಿದ್ದ ಜಲ್ಲಿ ಕಲ್ಲನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು..





























