ಪುತ್ತೂರು: ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ ಕಾರ್ಯನಿರ್ವಹಣಾ ತಂಡದ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿದ, ನಗರ ಮಂಡಲ ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ ರಾವ್, ಬಿಜೆಪಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಬಾರಿ ರಾಷ್ಟಪತಿ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಯಾಗಿ ದ್ರೌಪದೀಯವರನ್ನು ಆಯ್ಕೆ ಮಾಡಿರುವುದು ನಾವೆಲ್ಲ ಅತ್ಯಂತ ಹೆಮ್ಮೆ ಪಡುವ ವಿಚಾರವೆಂದರು.
ಮಹಿಳಾ ಮೋರ್ಚಾದಿಂದ ಧಾರ್ಮಿಕ ವಿಚಾರಗಳ ಬಗ್ಗೆ ಅರಿವು ಮೂಡಿಸಿ, ಮಹಿಳೆಯರನ್ನು ಜಾಗೃತಗೊಳಿಸುವಂತಹ ಕಾರ್ಯವನ್ನು ನಡೆಸಬೇಕಾಗಿರುವುದು ಅತ್ಯವಶ್ಯಕವಾಗಿದೆ . ಹಾಗೆಯೇ ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಎರಡು ಮಂಡಲಗಳ ನೇತೃತ್ವದಲ್ಲಿ ಜಂಟಿಯಾಗಿ ಸೇರಿ ಮಹಿಳಾ ಸಮಾವೇಶವೊಂದನ್ನು ಆಯೋಜಿಸಲಿದ್ದು,ಮಹಿಳೆಯರನ್ನು ಸಂಘಟಿಸುವ ಕಾರ್ಯದಲ್ಲಿ ಮಹಿಳಾ ಮೋರ್ಚಾ ದವರು ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗಿ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಾವತಿ ರವಿನಾರಾಯಣ ಮಾತನಾಡಿ, ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಬೂತ್ ಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವಂತಹ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ದವರು ಕಾರ್ಯತತ್ಪರರಾಗುವಂತೆ ತಿಳಿಸಿದರು.
ಮಹಿಳಾ ಮೋರ್ಚ ಸದಸ್ಯರಾದ ಪ್ರೇಮ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ನಾಯಕ್ ಸ್ವಾಗತಿಸಿ, ಕಾರ್ಯದರ್ಶಿಗಳಾದ ಆಶಾ ಭಗವಾನ್ ರವರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಯವರು ಕಾರ್ಯಕ್ರಮ ನಿರೂಪಿಸಿದರು.



























