ಪುತ್ತೂರು: ರೋಟರಿ ಜಿಲ್ಲೆ 3181 ವಲಯ ಇದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವೂ ಜು.2 ರಂದು ಬಪ್ಪಳಿಗೆ-ಬೈಪಾಸ್ ನಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಲಿದೆ.
ರೋಟರಿ ಜಿಲ್ಲೆ 3181 ವಲಯ ಇದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ರೈ, ಕಾರ್ಯದರ್ಶಿಯಾಗಿ ಶಶಿಕಿರಣ್ ರೈ ನೂಜಿಬೈಲ್, ಕೋಶಾಧಿಕಾರಿಯಾಗಿ ವಸಂತ ಜಾಲಾಡಿ ರವರು ಆಯ್ಕೆಯಾಗಿದ್ದು, ಅವರ ಪದಗ್ರಹಣ ಸಮಾರಂಭ ಜೂ.2 ರಂದು ನಡೆಯಲಿದೆ.

ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181 ಇದರ ಪಿಡಿಜಿ ಡಿ.ಎಸ್ ರವಿ ರವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಿ ಕೊಡಲಿದ್ದಾರೆ. ರೋಟರಿ ವಲಯ ಇದರ ಅಸಿಸ್ಟೆಂಟ್ ಗವರ್ನರ್ ಎ. ಜಗಜೀವನ್‌ದಾಸ್ ರೈ, ವಲಯ ಸೇನಾನಿ ಪುರಂದರ ರೈ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ. ರವರು
ಭಾಗವಹಿಸಲಿದ್ದಾರೆ ಎಂದು ರೋಟರಿ ಕ್ಲಬ್ ಪ್ರಕಟಣೆ ತಿಳಿಸಿದೆ..