ವಿಟ್ಲ: ಉದ್ಯಮಿಯೋರ್ವರ ಮನೆಗೆ ನುಗ್ಗಿದ ಪಾನಮತ್ತ ವ್ಯಕ್ತಿಯೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ.
ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಗೆ ಚಂದಳಿಕೆ ಸಮೀಪದ ರಿಕ್ಷಾ ಡ್ರೈವರ್ ಗಣೇಶ್ ಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ಕಳೆದ ರಾತ್ರಿ ನವೀನ್ ಅವರ ಮನೆಯ ಮುಂದೆ ನಿಂತು ಬೊಬ್ಬೆಹಾಕುತ್ತಿದ್ದು, ನಿನ್ನೆ ಸುಮಾರು ಸಂಜೆ ನವೀನ್ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇದ್ದ ವೇಳೆ ಈ ಕುಡುಕ ಏಕಾಏಕಿ ಮನೆಯೊಳಗೆ ನುಗ್ಗಿ, ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಗಾಬರಿಗೊಂಡ ಮಹಿಳೆ ಬೊಬ್ಬೆ ಹೊಡೆದು ಮನೆಯ ರೂಂ ಗೆ ಮಕ್ಕಳೊಂದಿಗೆ ಓಡಿ ಹೋಗಿ, ತನ್ನ ಗಂಡನಿಗೆ ಫೋನ್ ಮುಖಾಂತರ ವಿಷಯ ತಿಳಿಸಿದ್ದಾರೆ.
ಈ ವೇಳೆ ನವೀನ್ ತನ್ನ ಆಸುಪಾಸಿನವರಿಗೆ ಫೋನ್ ಮುಖಾಂತರ ವಿಚಾರ ತಿಳಿಸಿದ್ದಾರೆ. ನೆರೆಹೊರೆಯವರು ಈತನ ಬಳಿ ಧಾವಿಸುವುದನ್ನು ಕಂಡ ಈತ ನವೀನ್ ರವರಿಗೆ ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ. ಈ ಬಗ್ಗೆ ಆರೋಪಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




























