ವಿಟ್ಲ: ಸಹಶಿಕ್ಷಕರೊಂದಿಗೆ ಕಷ್ಟ ಸುಖ ಹಂಚಿಕೊಂಡು ಬದುಕಿ, ವಿದ್ಯಾರ್ಥಿಗಳೊಡನೆ ಪ್ರೀತಿಯ ಗುರುಗಳಾಗಿ ಶಾಲೆಯ ಭೋಧನಾ ಕ್ಷೇತ್ರದಲ್ಲಿ 21 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಉಮಾ ಬಹನ್ ರವರಿಗೆ ಜು.2 ರಂದು ಬೀಳ್ಕೊಡುಗೆ ಸಮಾರಂಭ ನೆರವೇರಿತು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಜಯರಾಮ್ ರೈ ರವರು ಸ್ವಾಗತ ಭಾಷಣ ಮಾಡುತ್ತಾ, ಉಮಾ ಬಹನ್ ರವರು ತಮ್ಮ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದನ್ನು ಸ್ಮರಿಸಿಕೊಂಡರು ಹಾಗೂ ಶುಭ ಹಾರೈಸಿದರು.
ಹಿರಿಯ ಅಧ್ಯಾಪಕಿಯಾದ ಕವಿತಾ ರವರು ಶಿಕ್ಷಕಿಯ ವ್ಯಕ್ತಿ ಪರಿಚಯ ಮಾಡಿ ಅವರ ಮುಂದಿನ ಬದುಕಿಗೆ ಶುಭ ಕೋರಿದರು.

ಆಡಳಿತ ಮಂಡಳಿ ಹಾಗೂ ಶಿಕ್ಷಕರಿಂದ ಉಮಾ ಬಹನ್ ರವರಿಗೆ ಫಲ ಪುಷ್ಪ ಹಾಗೂ ನೆನಪಿನ ಕಾಣಿಕೆಯನ್ನಿತ್ತು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಉಮಾ ರವರು ಶಾಲೆಯಲ್ಲಿ ಇದ್ದ ಅವರ ಸವಿ ಅನುಭವಗಳನ್ನು ಮೆಲುಕು ಹಾಕುತ್ತಾ ಸಂಸ್ಥೆಯ ಅಭಿವೃದ್ಧಿಗೆ ಶುಭ ಹಾರೈಸಿದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್. ಎನ್ ಕುಡೂರುರವರು ಹಿರಿಯ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ, ಕಾಯದರ್ಶಿಗಳಾದ ಮೋಹನ್ ಎ, ಜೊತೆ ಕಾಯದರ್ಶಿಗಳಾದ ಪ್ರಕಾಶ್ ಕುಕ್ಕಿಲ, ನಿರ್ದೇಶಕರಾದ ಹಸನ್ ವಿಟ್ಲ, ವಿಜಯ ಪಾಯಸ್, ಆಡಳಿತಾಧಿಕಾರಿಗಳಾದ ರಾಧಾಕೃಷ್ಣ ಎ, ಉಪ ಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ, ಶಿಕ್ಷಕ ಹಾಗು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
