ಮಂಗಳೂರು: ಗೋಹತ್ಯೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಬಜ್ಪೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಆನಂದ ಗೌಡ (52), ಮೋಹನ್ ಗೌಡ (49), ಮೊಹಮ್ಮದ್ ಜಮಾಲ್ (39), ಮೊಹಮ್ಮದ್ ಷರೀಫ್ (49) ಮತ್ತು ಮೊಹಮ್ಮದ್ ರಿಯಾಜ್ (30) ಬಂಧಿತರು.
ಬಂಧಿತರಿಂದ ಪಿಕಪ್ ವಾಹನ, ಜಾನುವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಬಜ್ಪೆ ಪಿಐ ಕುಸುಮಾದರ್, ಪಿಎಸ್ ಐ ಪೂವಪ್ಪ, ಕಮಲಾ, ಎಎಸ್ ಐ ರಾಮ ಪೂಜಾರಿ ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.