ಪುತ್ತೂರು: ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(ಐಎಮ್ ಎ) ವೈದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್ ರವರಿಗೆ ಕರ್ನಾಟಕ ನಾಥಾ ಪಂಥ ಜೋಗಿ ಸುಧಾರಕ ಸಮಾಜ ಸಂಘ ಕರ್ನಾಟಕ ಪುತ್ತೂರು ತಾಲುಕು ಇದರ ವತಿಯಿಂದ ಸನ್ಮಾನಿಸಲಾಯಿತು.

ಜೋಗಿ ಸಮಾಜದ ಸಂಪ್ರದಾಯದಂತೆ ಹಣೆಗೆ ತಿಲಕ ಇಟ್ಟು ಆರತಿ ಬೆಳಗಿ ದಂಪತಿಗೆ ಹೂ ಮುಡಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಿವೃತ್ತ ಉಪ ತಹಶೀಲ್ದಾರ್ ಮೋನಪ್ಪ ಪುರುಷ, ಖ್ಯಾತ ಸ್ಯಾಕ್ಸೋಫೋನ್ ವಾದಕ ಪಿ.ಕೆ ಗಣೇಶ್, ದಯಾನಂದ್ ಎಂ.ಆದರ್ಶ ಆಸ್ಪತ್ರೆ, ಹರೀಶ್ ಮಾಯಂಗಳ, ಪ್ರಕಾಶ್ ಟೈಲರ್ ದರ್ಬೆ, ಸತೀಶ್ ಪುರುಷರಕಟ್ಟೆ, ಕಸ್ತೂರಿ, ಮಲ್ಲಿಕಾ, ವಿಜಯ ಪಿ,ಶ್ವೇತಾ ರವಿ ಕುಮಾರ್, ದಯಾನಂದ ಕೇಪು, ಶಿವಕುಮಾರ್,ರವಿ ಎಂ,ರವಿ ಮುಗೆರಡ್ಕ, ರಮೇಶ್ ಮಣಿಯ, ರಮೇಶ್ ಕೇಪು,ಅನುಪಮ, ನಿವೃತ್ತ ಮುಖ್ಯ ಶಿಕ್ಷಕಿ ಪುಷ್ಪ, ವಿಠಲ ಮುಕ್ವೆ, ಯೋಗಿನಾಥ್ ಮುಗೇರಡ್ಕ, ದೇವಪ್ಪ ಮಾಸ್ಟರ್, ರವಿ ಮಣಿಯ ಮತ್ತು ಸಂಘದ ಇತರೆ ಸದಸ್ಯರು ಉಪಸ್ಥಿತರಿದ್ದರು.



























