ವಿಟ್ಲ: ಮನೆಯಿಂದ ತೆರಳಿದ ವ್ಯಕ್ತಿಯೋರ್ವರು ಮನೆಗೆ ಬಾರದ ನಾಪತ್ತೆಯಾದ ಘಟನೆ ಕನ್ಯಾನ ಬಂಡಿತ್ತಡ್ಕ ಎಂಬಲ್ಲಿ ಜು.5 ರಂದು ನಡೆದಿದೆ.
ಕನ್ಯಾನ ಬಂಡಿತ್ತಡ್ಕ ನಿವಾಸಿ ಮುಂಡಪ್ಪ (ಮುದ್ದ) (60) ಕಾಣೆಯಾದ ವ್ಯಕ್ತಿ.

ಮುಂಡಪ್ಪ ರವರು ಜು.4 ರಂದು ಮನೆಯಿಂದ ಪೇಟೆಗೆಂದು ತೆರಳಿದ್ದು, ಆದರೇ ಜು.5 ರವರೆಗೂ ಮನೆಗೆ ವಾಪಸ್ಸಾಗಲಿಲ್ಲ ಎಂದು ಮನೆಯವರು ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪರಿಚಿತರು ಯಾರದರೂ ಅವರನ್ನು ಕಂಡರೆ ತಕ್ಷಣ ಠಾಣೆಗೆ ತಿಳಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.