ವಿಟ್ಲ: ಭಾರೀ ಮಳೆಗೆ ರಸ್ತೆ ಬದಿಯ ಗುಡ್ಡ ಕುಸಿದ ಘಟನೆ ವಿಟ್ಲ-ಕಾಸರಗೋಡು ರಸ್ತೆಯ ಕಾಶಿಮಠ ಎಂಬಲ್ಲಿ ನಡೆದಿದೆ.

ಭಾರೀ ಮಳೆಗೆ ವಿಟ್ಲ-ಕಾಸರಗೋಡು ರಸ್ತೆಯ ಕಾಶಿಮಠದಲ್ಲಿ ಗುಡ್ಡ ಕುಸಿದು ಬಿದ್ದಿದ್ದು, ಗುಡ್ಡ ಮೂಲಕ ಅಳವಡಿಸಲಾಗಿದ್ದ ಕುಡಿಯುವ ನೀರಿನ ಪೈಪ್ ಲೈನ್ ಗಳು ಸಹ ಮಣ್ಣಿನಡಿ ಸಿಲುಕಿದ್ದು, ಪೈಪ್ ಲೈನ್ ಗಳ ಮೂಲಕ ನೀರನ್ನು ಪಡೆಯುವ ಆ ಭಾಗದ ಜನರು ಮಳೆಗಾಲದಲ್ಲಿಯೂ ಕುಡಿಯುವ ನೀರಿಗೆ ಸಂಕಷ್ಟ ಪಡುವಂತಾಗಿದೆ.
ಅಷ್ಟೇ ಅಲ್ಲದೇ ಈಗ ಅರ್ಧ ಪ್ರಮಾಣದ ಗುಡ್ಡ ಮಾತ್ರ ಕುಸಿದಿದ್ದು, ಪೂರ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾದರೆ ವಿಟ್ಲ-ಕಾಸರಗೋಡು ರಸ್ತೆ ಸಂಪೂರ್ಣ ಬಂದ್ ಆಗಲಿದೆ. ಈ ಹಿನ್ನೆಲೆ ಜನ ಸಂಕಷ್ಟ ಪಡುವಂತಾಗಿದೆ.

ಇದೇ ರೀತಿ ರಾತ್ರಿ ಪೂರ್ತಿ ಮಳೆಯಾದರೇ ಗುಡ್ಡದ ಇನ್ನೊಂದು ಭಾಗವೂ ಕುಸಿಯುವ ಭೀತಿಯಲ್ಲಿದೆ..


























