ಮಂಗಳೂರು: ನಗರ ಹಾಗೂ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳದಲ್ಲಿ ತಡರಾತ್ರಿ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ಮಂಗಳೂರು ನಗರದಲ್ಲಿ ಕೆಲವೆಡೆ ಹಾನಿಯುಂಟಾಗಿದೆ. ಗುಡುಗು ಸಿಡಿಲು ಸಹಿತ ಸುರಿದ ಅಕಾಲಿಕ ಮಳೆಗೆ ನಗರದ ಹೊರವಲಯದ ಮುಳಿಹಿತ್ಲು ಬಳಿ ವಿದ್ಯುತ್ ಕಂಬ ಬಿದ್ದು ಎರಡು ಕಾರಿಗೆ ಹಾನಿಯುಂಟಾಗಿದೆ. ನಗರದ ಲೇಡಿಹಿಲ್ ಎಂಬಲ್ಲಿ ಮರವೊಂದು ಧರೆಗುರುಳಿದೆ.