ಕಡಬ: ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭವಿತ್ ರೈ ಪಾಲ್ತಾಡಿ ರವರು ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿ ಹೊಂದಿದ್ದು, ಕಡಬ ಠಾಣೆಯಲ್ಲಿಯೇ ಮುಂದುವರೆಯಲಿದ್ದಾರೆ.

ಭವಿತ್ ರೈ ರವರು ಈ ಮೊದಲು 5 ವರ್ಷಗಳ ಕಾಲ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ‘ಜನಸ್ನೇಹಿ ಪೊಲೀಸ್’ ಎಂದೇ ಖ್ಯಾತ ರಾಗಿದ್ದರು. ಕಳ್ಳತನ, ದರೋಡೆ, ಇನ್ನಿತರ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದರು.
ಕಳೆದ 4.5 ವರ್ಷ ಗಳಿಂದ ಕಡಬ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಜನರ ಪ್ರೀತಿ ಪಾತ್ರರಾಗಿದ್ದಾರೆ.

























