ಬಂಟ್ವಾಳ: ಕಾರ್ಮಿಕರು ಉಳಿದುಕೊಂಡ ಶೆಡ್ ಗೆ ಗುಡ್ಡ ಕುಸಿದು, ಶೆಡ್ ನೊಳಗೆ ಸಿಲುಕಿಕೊಂಡ ನಾಲ್ವರು ಕಾರ್ಮಿಕರ ಪೈಕಿ ಮೂವರು ಮೃತಪಟ್ಟು , ಓರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಬ್ಬರ್ ತೋಟದ ಮಾಲಕ ಬೆನಡಿಕ್ಟ ರವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಬೆನಡಿಕ್ಟ ಎಂಬವರ ಮನೆಯ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಐವರ ಪೈಕಿ ನಾಲ್ವರು ಗುಡ್ಡ ಜರಿದು ಶೆಡ್ ನೊಳಗೆ ಸಿಲುಕಿಕೊಂಡಿದ್ದರು, ಅದರಲ್ಲಿ ಮೂವರನ್ನು ಜೆಸಿಬಿ ಮೂಲಕ ರಕ್ಷಣೆ ಮಾಡಿದರೆ ಓರ್ವ ಮೃತಪಟ್ಟಿದ್ದ. ಉಳಿದಂತೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ರಾತ್ರಿ ಮೃತಪಟ್ಟಿದ್ದರು.
ಪಾಲಕ್ಕಾಡು ನಿವಾಸಿ ವಿಜು (46)ಉಳಿದಂತೆ ಕೊಟ್ಟಾಂ ನಿವಾಸಿ ಬಾಬು (46) ಸಂತೋಷ್ ಅಲ್ಫೊನ್ಸಾ ಮೃತಪಟ್ಟ ದುರ್ದೈವಿಗಳು. ಕಣ್ಣೂರು ನಿವಾಸಿ ಜಾನ್ (44)ಎಂಬಾತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪಂಜಿಕಲ್ಲು ಗ್ರಾಮ ಪಂಚಾಯತ್ ಗ್ರಾಮಕರಣಿಕರಾಗಿರುವ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಜು.5 ರಂದು ಗುಡ್ಡ ಕುಸಿತದ ಬಗ್ಗೆ ಭೇಟಿ ನೀಡಿ ಪರಿಶೀಲಿಸಿ ಹಳೆ ಮನೆ ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರನ್ನು ತೆರವು ಗೊಳಿಸುವಂತೆ, ಜಾಗ್ರತೆ ವಹಿಸುವಂತೆ ಮೌಖಿಕವಾಗಿ ಸೃಷ್ಟ ಸೂಚನೆಗಳನ್ನು ನೀಡಿದ್ದರೂ, ಕೂಡ ಬೆನಡಿಕ್ಟ ಕಾರ್ಲೋಕ್ಟ್ ರವರು ಯಾವುದೇ ಮುಂಜಾಗ್ರತೆ ಕ್ರಮವನ್ನು ವಹಿಸದೆ ಬೇಜವಾಬ್ದಾರಿ ಮತ್ತು ನಿರ್ಲಕ್ಷ ತೋರಿಸಿದ್ದುದರಿಂದ ಜು.6 ರಂದು ಅದೇ ಗುಡ್ಡ ಪುನಃ ಕುಸಿತ ಗೊಂಡು ಮಣ್ಣು ಹಳೆಯ ಹಂಚು ಛಾವಣಿ ಮನೆಯ ಮೇಲೆ ಬಿದ್ದುದರಿಂದ ಮನೆಯ ಒಳಗೆ ಇದ್ದ ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡು ಗಾಯಗೊಂಡು ಆ ಪೈಕಿ 3 ಜನ ಮೃತ ಪಡಲು ಬೆನಡಿಕ್ಟ ಕಾರ್ಲೋರವರ ಅಜಾರೂಗತೆಯೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅ,ಕ್ರ 49-2022 ಕಲಂ: 337,304(a) ರಂತೆ ಪ್ರಕರಣ ದಾಖಲಾಗಿದೆ.


























