ಬಂಟ್ವಾಳ: ಲಾರಿಯ ಚಕ್ರವು ಮಣ್ಣಿನಲ್ಲಿ ಹೂತು ಬಿದ್ದ ಹಿನ್ನೆಲೆ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾದ ಘಟನೆ ಜು.8 ರಂದು ಕಲ್ಲಡ್ಕದಲ್ಲಿ ನಡೆದಿದೆ.

ಲಾರಿವೊಂದರ ಚಕ್ರವು ರಸ್ತೆ ಬದಿಯ ಮಣ್ಣಿನಲ್ಲಿ ಹೂತು ಹೋದ ಹಿನ್ನೆಲೆ ವಾಹನ ಸಂಚಾರದಲ್ಲಿ ವ್ಯತಯ ಉಂಟಾಗಿದ್ದು, ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಒಂದು ಗಂಟೆಯೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇನ್ನೂ ಕೂಡ ರಸ್ತೆ ಸಂಚಾರ ಸುಗಮವಾಗದ ಹಿನ್ನೆಲೆ ಕೆಲವು ವಾಹನಗಳು ಶಂಭೂರು-ದಾಸಕೋಡಿ ಮೂಲಕ ಪುತ್ತೂರು, ಉಪ್ಪಿನಂಗಡಿಗೆ ಸಂಚರಿಸುತ್ತಿದ್ದಾರೆ.

ಒಂದು ಕಡೆ ಹೆದ್ದಾರಿ ಕಾಮಗಾರಿ ಮತ್ತೊಂದು ಕಡೆ ಮಳೆಯಿಂದ ದಿನ ಪರದಾಟ ನಡೆಸುವ ವಾಹನ ಸವಾರರು ಮತ್ತು ಪ್ರಯಾಣಿಕರು ಇಂದು ಟ್ರಾಫಿಕ್ ಜಾಮ್ ನಿಂದಾಗಿ ಪರದಾಟ ನಡೆಸುವಂತಾಗಿದೆ..


























