ಸುಳ್ಯ: ತಾಲೂಕಿನಾದ್ಯಂತ ಇರುವ ಬಹಳಷ್ಟು ಭಜನಾ ಮಂದಿರಗಳು ಮತ್ತು ಶ್ರದ್ಧಾ ಕೇಂದ್ರಗಳ ಅಡಿಸ್ಥಳ ಜಾಗದ ದಾಖಲೆಗಳನ್ನು ಶೀಘ್ರವಾಗಿ ಮಂಜೂರಾತಿ ಗೊಳಿಸುವಂತೆ ಕಂದಾಯ ಸಚಿವರಾದ ಆರ್. ಅಶೋಕ್ ರವರಿಗೆ ವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿ.ಹೆಚ್.ಪಿ. ಪ್ರಧಾನ ಕಾರ್ಯದರ್ಶಿ ರಂಜಿತ್, ಬಜರಂಗದಳ ಜಿಲ್ಲಾ ಸಂಚಾಲಕ ಲತೀಶ್ ಗುಂಡ್ಯ, ಸಹ ಸಂಯೋಜಕ್ ನವೀನ್ ಸುಳ್ಯ, ರೂಪೇಶ್, ಮಹೇಶ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.


























