ಚೆನ್ನೈ: ತಮಿಳು ಖ್ಯಾತ ನಟ ವಿಕ್ರಮ್ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಕ್ರಮ್ ಆರೋಗ್ಯ ಕುರಿತಂತೆ ಮಾಹಿತಿ ನೀಡಿರುವ ನಟನಆಪ್ತರು, ಖಾಸಗಿ ಆಸ್ಪತ್ರೆಯಲ್ಲಿ ವಿಕ್ರಮ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಇಂದು ನಟ ವಿಕ್ರಮ್ ಅವರು, ಚೆನ್ನೈನಲ್ಲಿ ಸಂಜೆ 6 ಗಂಟೆಗೆ ನಡೆಯಬೇಕಿದ್ದ ಪೊನ್ನಿಯಿನ್ ಸೆಲ್ವನ್ ಅವರ ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು. ಇನ್ನು, ವಿಕ್ರಮ್ ಅವರು ಇತ್ತೀಚೆಗೆ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದ ಮಹಾನ್ ಸಿನಿಮಾದಲ್ಲಿ ನಟಿಸಿದ್ದರು. ಮಹಾನ್ ಸಿನಿಮಾದಲ್ಲಿ ವಿಕ್ರಮ್ ಪುತ್ರನೊಂದಿಗೆ ಸ್ಟೀನ್ ಶೇರ್ ಮಾಡಿದ್ದ ಅವರು, ಸದ್ಯ ಕೋಬ್ರಾ, ಮಣಿರತ್ನಂ ನಿದೇರ್ಶನದ ಮ್ಯಾಗ್ನಂ ಓಪನ್ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಪಾ.ರಜಿನಿತ್ ಅವರ ಇನ್ನು ಹೆಸರಿಡ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.


























