ವಿಟ್ಲ: ಬ್ರಿಗೇಡ್ ಬ್ರದರ್ಸ್ ಅಡ್ಯನಡ್ಕ ಹಾಗೂ ವಾರಣಾಶಿ ಫಾರ್ಮ್ಸ್, ಅಡ್ಯನಡ್ಕ ಇದರ ಆಶ್ರಯದಲ್ಲಿ ‘ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮ ಜು.10 ರಂದು ಸರವು ವಾರಣಾಶಿ ಫಾರ್ಮ್ಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಕೃಷ್ಣ ಪೂಜಾರಿ ರವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಡಾ. ಕೃಷ್ಣ ಮೂರ್ತಿ ವಾರಣಾಶಿ ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಾಹ್ಯಾಕಾಶ ವಿಜ್ಞಾನಿಗಳಾದ ಸುಶೀಲ ಮುನಿಯಪ್ಪ, ಪ್ರತಿಮಾ ಮುನಿಯಪ್ಪ , ಪುಣಚ ಗ್ರಾಮ ಪಂಚಾಯತ್ ಸದಸ್ಯರಾದ ಶಾರದಾ ಉದಯ ಕುಮಾರ್, ಪುಣಚ ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ನಾಯ್ಕ ತೊಂಡನಡ್ಕ, ಪುಣಚ ಗ್ರಾಮ ಪಂಚಾಯತ್ ಸದಸ್ಯರಾದ ವಾಣಿಶ್ರೀ ಪಂಡಿತಮೂಲೆ, ಪುಣಚ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ನಾಯ್ಕ ಆಗಮಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಬಂಟ್ವಾಳ ಡಿ. ವೈ. ಎಸ್. ಪಿ. ಪ್ರತಾಪ್ ಸಿಂಗ್, ಬಜರಂಗದಳ ಪ್ರಾಂತ ಸಹ ಸಂಚಾಲಕರಾದ ಮುರಳಿಕೃಷ್ಣ ಹಸಂತಡ್ಕ, ಕೃಷಿ ವಿಜ್ಞಾನಿ ಮತ್ತು ಅಂತರಾಷ್ಟ್ರೀಯ ಈಜು ತರಬೇತಿದಾರರಾದ ಪಾರ್ಥ ವಾರಣಾಶಿ, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಹಿಂದೂ ಯುವ ಮುಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ, ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಭಟ್, ಪುಣಚ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಮೂಡಂಬೈಲು ರವರು ಆಗಮಿಸಲಿದ್ದಾರೆ.




























