ಪುತ್ತೂರು : ಮೊಗರ್ನಾಡು ಶ್ರೀ ರಾಜಗೋಪಾಲ ಆಚಾರ್ಯರ ನೇತೃತ್ವದಲ್ಲಿ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಠಾನ ಪಡ್ನೂರು ಗುರುಂಪುನಾರು ಇಲ್ಲಿ ಸ್ವಾಮಿ ಕೊರಗಜ್ಜ ಶಿಲಾಮಯ ವಿಗ್ರಹ ಪ್ರತಿಷ್ಠಾಪನೆ ಮತ್ತು ಧರ್ಮ ದೈವದ ದೈವಸ್ಥಾನ ಪುನರ್ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವವು ಏ.30 ರಿಂದ ಮೇ.1 ರವರೆಗೆ ನೇರವೆರಲಿದೆ.
ಅನಾದಿ ಕಾಲದಿಂದ ಪೂಜಿಸಿಕೊಂಡು ಬಂದಿರುವ ಸ್ವಾಮಿ ಕೊರಗಜ್ಜ ದೈವಸ್ಥಾನವು ಜೀರ್ಣೋದ್ಧಾರಗೊಂಡು,ಪುನರ್ ಪ್ರತಿಷ್ಠೆ ನಡೆಸಲು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯು ತೀರ್ಮಾನಿಸಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸ್ವಾಮಿ ಕೊರಗಜ್ಜ ಸನ್ನಿಧಿ ಗುರುಂಪುನಾರು ನಲ್ಲಿ ನಡೆಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷರಾದ ಪೂವಪ್ಪ ಮೇಸ್ತ್ರಿ ಗುರುಂಪುನಾರು, ಕಾರ್ಯದರ್ಶಿ ದಿನೇಶ್ ಗುರುಂಪುನಾರು ಹಾಗೂ ಸದಸ್ಯರಾದ ಭರತ್ ಎ.ಜಿ, ಮಹೇಶ್, ಮುರಳೀಧರ ಪೂಜಾರಿ, ಕೃಷ್ಣಪ್ಪ ಪೂಜಾರಿ, ನರೇಶ್, ಕೇಶವ ಗುರುಂಪುನಾರು, ಲೋಕೇಶ್, ಮಹೇಶ್ ನೆಕ್ಕಿಲ ಉಪಸ್ಥಿತರಿದ್ದರು. ದೈವಸ್ಥಾನದ ಜೀರ್ಣೋದ್ಧಾರಗೊಂಡು,ಪುನರ್ ಪ್ರತಿಷ್ಠೆ ಕಾರ್ಯಕ್ರಮಗಳು ಏ.30 ರಿಂದ ಮೇ.1 ರವರೆಗೆ ನಡೆಯಲಿದೆ ಎಂದು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.