ಪುತ್ತೂರು: ನ್ಯಾಯವಾದಿಗಳು ವಕೀಲಿ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ವೃತ್ತಿ ಧರ್ಮವನ್ನು ಪಾಲಿಸಬೇಕು ಎಂಬುದಾಗಿ ಹಿರಿಯ ನ್ಯಾಯವಾದಿ ಅರಂತನಡ್ಕ ಬಾಲಕೃಷ್ಣ ರೈ ರವರು ಹೇಳಿದರು.
ಅವರು ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಮನೋಹರ್ ಕೆವಿ ವಹಿಸಿದ್ದರು. ಯುವ ನ್ಯಾಯವಾದಿಗಳು ಕಾರ್ಯಗಾರದ ಲಾಭವನ್ನು ಪಡೆಯಬೇಕೆಂದು ಹೇಳಿದರು.

ಹಿರಿಯ ನ್ಯಾಯವಾದಿ ಎಸ್ ಸುಧೀರ್ ತೋಳ್ಪಾಡಿ ಭಾರತೀಯ ಸಾಕ್ಷ ಅಧಿನಿಯಮದ ಕುರಿತು ಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ, ಉಪಾಧ್ಯಕ್ಷರಾದ ಕಕ್ವೆ ಕೃಷ್ಣಪ್ಪಗೌಡ, ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಕೈಲಾರ್ ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಮತಾ ಸುವರ್ಣ ಪ್ರಾರ್ಥಿಸಿ, ನ್ಯಾಯವಾದಿ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು, ನ್ಯಾಯವಾದಿ ವಿಮಲೇಶ್ ಸಿಂಗಾರಕೋಡಿ, ಸುರೇಂದ್ರ, ಅಶೋಕ್ ಸಿ.ಎಚ್ ವಿವಿಧ ಜವಾಬ್ದಾರಿ ನಿರ್ವಹಿಸಿದರು.


























