ಪುತ್ತೂರು: ವಿಟ್ಲ ಮೂಲದ ಆಟೋ ಚಾಲಕರೊಬ್ಬರು ತನಗೆ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಅದರ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕ ಮೆರೆದಿದ್ದಾರೆ.

ಬಿಜೆಪಿ 4ನೇ ವಾರ್ಡ್ ಚಂದಳಿಕೆಯ ಅಧ್ಯಕ್ಷ ರಿಕ್ಷಾ ಚಾಲಕ ತಿರುಮಲೇಶ್ ಗೌಡ ನಿಡ್ಯ ರವರಿಗೆ ಪುತ್ತೂರಿನ ತೆಂಕಿಲದಲ್ಲಿರುವ ಗೌಡ ಸಮುದಾಯ ಭವನದಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ವಾರಸುದಾರರಾದ ಸ್ವರ್ಗ ಪಾಣಾಜೆ ನಿವಾಸಿಗಳಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ತಿರುಮಲೇಶ್ ರವರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


























