ಪುತ್ತೂರು: ಜು.14 ರಂದು ಕೋಟೇಚಾ ಸಭಾಭವನದಲ್ಲಿ ನಡೆಯುವ ಮುತ್ತಿನ ನಗರಿಯ ಹಿಂದೂ ಹೃದಯ ಸಾಮ್ರಾಟ್ ಡಾ.ಎಂ.ಕೆ. ಪ್ರಸಾದ್ ಅಭಿವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಜು.9 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಿತು.
ಸಭೆಯಲ್ಲಿ ಅಭಿವಂದನಾ ಕಾರ್ಯಕ್ರಮಕ್ಕೆ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಡಾ. ಸುರೇಶ್ ಪುತ್ತೂರಾಯ, ಸಂಚಾಲಕರಾಗಿ ಪಿ.ಜಿ. ಜಗನ್ನಿವಾಸ್ ರಾವ್, ಮುರಳಿಕೃಷ್ಣ ಹಸಂತ್ತಡ್ಕ, ಅರುಣ್ ಕುಮಾರ್ ಪುತ್ತಿಲ, ಸಂತೋಷ್ ರೈ ಕೈಕಾರ, ನವೀನ್ ರೈ ಪಂಜಳ, ಪ್ರವೀಣ್ ಶೆಟ್ಟಿ ತಿಂಗಳಾಡಿ, ರವಿ ಆಚಾರ್ಯ ಕೃಷ್ಣನಗರ, ದಿನೇಶ್ ಮೆದು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ರೈ ಹೊಸಮನೆ ರನ್ನು ಆಯ್ಕೆ ಮಾಡಲಾಯಿತು.
ಇನ್ನುಳಿದಂತೆ ಕಾರ್ಯದರ್ಶಿಯಾಗಿ ರಾಜೇಶ್ ರೈ ಪರ್ಪುಂಜ, ಕೋಶಾಧಿಕಾರಿ ಚಿನ್ಮಯ್ ಈಶ್ವರಮಂಗಲ, ಪ್ರಚಾರ (ಮಾಧ್ಯಮ) ವಿಭಾಗಕ್ಕೆ ರಾಜೇಶ್ ಬನ್ನೂರು ನೇಮಕಗೊಳಿಸಲಾಯಿತು.
ಸಮಿತಿ ಸದಸ್ಯರಾಗಿ ಕೃಷ್ಣ ಪ್ರಸಾದ್ ಶೆಟ್ಟಿ, ದಿನೇಶ್ ಪಂಜಿಗ, ಮಹೇಶ್ ಕೇರಿ, ವಿಶ್ವನಾಥ್ ಗೌಡ ಬನ್ನೂರು, ಅಶೋಕ್ ಕುಂಬ್ಳೆ, ಧರೇಶ್ ಹೊಳ್ಳ, ರಾಮಚಂದ್ರ ಕಾಮತ್, ಮನ್ಮಥ ಶೆಟ್ಟಿ ಕೊಡಿಪ್ಪಾಡಿ, ಚಂದ್ರಶೇಖರ್, ರಾಜು ಕೋರ್ಟ್ ರೋಡ್, ಸುಬ್ರಹ್ಮಣ್ಯ ಬಲ್ನಾಡ್ ಆಯ್ಕೆಗೊಂಡರು.



























