ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಘಟನೆ ಜು.9ರಂದು ರಾತ್ರಿ ಟೌನ್ ಬ್ಯಾಂಕ್ ಮುಂಭಾಗದ ಅಂಗಡಿ ಬಳಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಬಪ್ಪಳಿಗೆ ಸಿಂಗಾಣಿ ಆಶ್ರಯ ಕಾಲೊನಿ ರಘುರವರ ಪುತ್ರ ನಾಗೇಶ್ (37) ಎಂದು ಗುರುತಿಸಲಾಗಿದೆ. ಆಟೋ ರಿಕ್ಷಾ ಚಾಲಕರಾಗಿರುವ ನಾಗೇಶ್ ಮಾರ್ಕೆಟ್ ಬಳಿಯ ಪಾರ್ಕಿಂಗ್ ನಲ್ಲಿ ಬಾಡಿಗೆ ನಡೆಸುತ್ತಿದ್ದರು.

ಜು.9 ರಂದು ರಾತ್ರಿ ತನ್ನ ಪತ್ನಿಯೊಂದಿಗೆ ಪೇಟೆಗೆ ಬಂದಿದ್ದ ಅವರು ಟೌನ್ ಬ್ಯಾಂಕ್ ಮುಂಭಾಗದಲ್ಲಿರುವ ಅಂಗಡಿಗೆ ತೆರಳಿ ಗುಟ್ಕಾ ಖರೀದಿಸುವ ವೇಳೆ ಒಂದು ಪ್ಯಾಕೆಟ್ ಕೈಯಿಂದ ನೆಲಕ್ಕೆ ಬಿದ್ದಿತ್ತು. ಅದನ್ನು ಅಲ್ಲಿಯೇ ನಿಂತಿದ್ದ ನೆಹರು ನಗರ ರಕೇಶ್ವರಿ ವಠಾರದ ಪ್ರಸಾದ್( ಚಿನ್ನು) ರವರು ಕಾಲಿನಿಂದ ತುಳಿದಿದ್ದರು. ಅದು ತಿನ್ನುವಂತದ್ದು ಅದನ್ನು ಯಾಕೆ ತುಳಿಯುವುದು ಯಾಕೆ ಎಂದು ಕೇಳಿದಾಗ ಪ್ರಸಾದ್ ಅದನ್ನು ಕೇಳಲು ನೀನು ಯಾರು ಎಂದು ಹೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಹಲ್ಲೆ ನಡೆಸಿರುವುದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದು ನಾಗೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ನಾಗೇಶ್ ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:59/2022 ಕಲಂ: 504,323,354,506 ಐಪಿಸಿ ಮತ್ತು 3(1)( r), 3(1)(s) SC/ST ಆಕ್ಟ್ 2015 ರಂತೆ ಪ್ರಕರಣ ದಾಖಲಾಗಿದೆ.



























