ಪುತ್ತೂರು: ಯಂಗ್ ಬ್ರಿಗೇಡ್ ಪುತ್ತೂರು ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಪುತ್ತೂರು ದರ್ಬೆಯಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಬಕ್ರೀದ್ ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಯಂಗ್ ಬ್ರಿಗೇಡ್ ವತಿಯಿಂದ ಒಂದು ಹೊತ್ತಿನ ಉಪಹಾರ ವ್ಯವಸ್ಥೆ ಮಾಡಲಾಯಿತು. ಹಾಗೂ ಪುತ್ತೂರು ನಗರ ಸಭೆ ಸದಸ್ಯ ರಿಯಾಝ್ ಪರ್ಲಡ್ಕ ರವರು ತಮ್ಮ ಒಂದು ತಿಂಗಳ ಗೌರವಧನವನ್ನು ನೀಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಶರೀಫ್ ಬಲ್ನಾಡ್, ಬಾತೀಷ್ ಅಳಕೆಮಜಲು,ಶಕೀಲ್ ದರ್ಬೆ ,ಸನದ್ ಯೂಸುಫ್ ,ರಶೀದ್ ಅಮ್ಚಿನಡ್ಕ , ಬಾತೀಷ್ ಬಲ್ನಾಡ್ , ಉನೈಸ್ ಗಡಿಯಾರ್ ಉಪಸ್ಥಿತರಿದ್ದರು.





























