ಪುತ್ತೂರು: ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮವು ಜು.13 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಧರ್ಮ ನಿಷ್ಠೆ ಸಮಾಜದ ನಿರ್ಮಿತಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ವ್ಯಾಖ್ಯಾನ ಮತ್ತು ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಕುರಿತು ಗಣ್ಯರ ಮಾರ್ಗದರ್ಶನ ಹಾಗೂ ಕಿರುಚಿತ್ರ, ಸ್ವರಕ್ಷಣಾ ತರಬೇತಿಯ ಪ್ರಾತ್ಯಕ್ಷಿಕೆಗಳು, ಹಿತ ಚಿಂತಕರಿಗೆ ಸನ್ಮಾನ ನಡೆಯಲಿದೆ.



























