ಪುತ್ತೂರು: ತಾಲೂಕಿನಲ್ಲಿ ಪ್ರಾರಂಭವಾಗಲಿದೆ ‘ನೇಪಿಯರ್ ಗ್ರಾಸ್’ ಎಂಬ ಹುಲ್ಲಿನಿಂದ ಉತ್ಪಾದನೆಯಾಗುವ ಜೈವಿಕ ಇಂಧನ ಘಟಕ. ಜು.12 ರಂದು “ಪುತ್ತೂರು ರೈತರ ಜೈವಿಕ ಉತ್ಪಾದನಾ ಕಂಪನಿ ನಿಯಮಿತ ” ಇದರ ನೂತನ ಕಚೇರಿಯ ಉದ್ಘಾಟನೆ ಮತ್ತು ಜೈವಿಕ ಇಂಧನ ಉತ್ಪಾದನೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಜು.12 ರಂದು ಸಂಜೆ 3.30 ಕ್ಕೆ ಪುತ್ತೂರಿನ ಎ. ಪಿ. ಎಂ. ಸಿ ರಸ್ತೆಯ ಹಿಂದುಸ್ಥಾನ್ ಕಾಂಪ್ಲೆಕ್ಸ್ ನ 1 ನೇ ಮಹಡಿಯಲ್ಲಿ ಪುತ್ತೂರು ರೈತರ ಜೈವಿಕ ಉತ್ಪಾದನಾ ಕಂಪನಿ ನಿಯಮಿತ ಇದರ ನೂತನ ಕಚೇರಿಯ ಉದ್ಘಾಟನೆ ಮತ್ತು ಜೈವಿಕ ಇಂಧನ ಉತ್ಪಾದನೆಯ ಬಗ್ಗೆ ಮಾಹಿತಿ ಕಾರ್ಯಾಗಾರವು ನಡೆಯಲಿದೆ.
ಭಾರತದ ವಿಜ್ಞಾನಿ , ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಂಶೋಧನೆಯ ತಳಹದಿಯ ಮೇಲೆ ಪರಿಸರಕ್ಕೆ ಪೂರಕವಾದ ಬಯೋ ಇಂಧನಗಳನ್ನು ಉತ್ಪಾದಿಸಲು ಭಾರತದಾದ್ಯಂತ ಆಂದೋಲನಗಳು ಕೈಗೊಂಡು ರೈತರ ಮುಖಾಂತರ ಬೆಳೆಸಿದ ನೇಪಿಯರ್ ಗ್ರಾಸ್ (ಹುಲ್ಲು) ನಲ್ಲಿ ಬಯೋ ಡೀಸೆಲ್/ಬಯೋ ಸಿ. ಎನ್. ಜಿ/ಬಯೋ ಅಡುಗೆ ಅನಿಲ ತಯಾರಿ ಮಾಡುವ ಯೋಜನೆಯನ್ನು ಹಾಕಿಕೊಂಡು ಭಾರತ ಸರಕಾರದ ಅಧಿಕೃತವಾಗಿ ಅನುಮತಿ ಹೊಂದಿದ ರೈತ ಉತ್ಪಾದನಾ ಸಂಸ್ಥೆ “ಮೀರಾ ಕ್ಲೀನ್ ಫ್ಯುಯೆಲ್ಸ್ ಲಿಮಿಟೆಡ್” (MCL) ನ ಆಶ್ರಯದಲ್ಲಿ “ಪುತ್ತೂರು ರೈತರ ಜೈವಿಕ ಉತ್ಪಾದನಾ ಕಂಪನಿ ನಿಯಮಿತ “ಅಸ್ತಿತ್ವಕ್ಕೆ ಬರುತ್ತಿದೆ ಅಲ್ಲದೇ ಪ್ರತೀ ಗ್ರಾಮದಲ್ಲಿ ಒಬ್ಬ ರೈತರನ್ನು ಪ್ರವರ್ತಕರಾಗಿ ಆಯ್ಕೆಮಾಡಿ ಪ್ರತೀ ಗ್ರಾಮದಲ್ಲಿ ಜೈವಿಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.
ಪುತ್ತೂರು ತಾಲೂಕು ಅಲ್ಲದೇ ಕಡಬ , ಬೆಳ್ತಂಗಡಿ, ಮೂಡಬಿದ್ರೆ , ಬಂಟ್ವಾಳ, ಸುಳ್ಯ,ತಾಲೂಕುಗಳಲ್ಲೂ ಸಂಸ್ಥೆಯ ಶಾಖೆಗಳು ಅಸ್ತಿತ್ವಕ್ಕೆ ಬರುತ್ತಿವೆ.
ನೂತನ ಕಚೇರಿಯ ಉದ್ಘಾಟನೆ ಮತ್ತು ಕಾರ್ಯಾಗಾರದ ಸಭಾಧ್ಯಕ್ಷತೆಯನ್ನು ಶಾಸಕರಾದ ಸಂಜೀವ ಮಠಂದೂರು ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಪುತ್ತೂರು ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರರಾದ ನಿಸರ್ಗ ಪ್ರಿಯ, ಪೌರಾಯುಕ್ತರಾದ ಮಧು ಯಸ್. ಮನೋಹರ್ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೊಟ್ಟು, ಸಹಕಾರಿ ಯೂನಿಯನ್ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ ಆಗಮಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಯಂ.ಸಿ.ಎಲ್ ಸೀನಿಯರ್ ಪ್ರೈಮ್ ಬಿಡಿಎ ಶ್ರವಣ್ ಮಾನೆ, ಉದಯ ಶೆಟ್ಟಿ ಬಿಸಿನೆಸ್ ಎಡ್ವೈಸರ್ ಮಾನೆ ಗ್ರೂಪ್ ಯಂ.ಸಿ.ಎಲ್ ಮುಂಬೈ, ವಸಂತ ಎನ್.ಪೂಜಾರಿ ಸೀನಿಯರ್ ಬಿಡಿಎ ಯಂ.ಸಿ.ಎಲ್ ಬೆಳ್ತಂಗಡಿ ರವರು ಮಾಹಿತಿ ಕಾರ್ಯಗಾರದಲ್ಲಿ ಸಮಗ್ರ ಮಾಹಿತಿಯನ್ನು ಕೊಡಲಿದ್ದಾರೆ.



























