ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ
ಸಂಬಂಧಿಸಿದಂತೆ ಬೆತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ
ಹೊಳೆಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.

ಮೃತದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ
ಪತ್ತೆಯಾಗಿದೆ.
ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಮೃತದೇಹ ಬೆಳಕಿಗೆ ಬಂದಿದೆ. ಮೃತದೇಹ ಸ್ಥಳೀಯರಿಗೆ ಸಿಕ್ಕಿದ್ದು, ಇಲಾಖೆಯವರು ಆಗಮಿಸಿದ ನಂತರ ಮೇಲೆತ್ತಲಾಗುತ್ತದೆ.


























