ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ
ಸಂಬಂಧಿಸಿದಂತೆ ಬೆತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ
ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾದ ಬೆನ್ನಲ್ಲೇ, ಅರ್ಧ ಗಂಟೆಯ ಬಳಿಕ ಎರಡನೇ ಮೃತದೇಹವೂ ಪತ್ತೆಯಾಗಿದೆ.

ಇಂದು ಬೆಳಗ್ಗೆ ಬೈತಡ್ಕ ಸೇತುವೆಯಿಂದ 200 ಮೀಟರ್ ದೂರದ ಮರಕ್ಕಡ ಜೇಡರಕೇರಿ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು, ಇದೀಗ ಅದರಿಂದ 50 ಮೀಟರ್ ಹಿಂದೆಯೇ ಎರಡನೇ ಮೃತದೇಹವೂ ಪತ್ತೆಯಾಗಿದೆ.

ಕಾರು ದುರಂತ ನಡೆದು ಮೂರನೇಯ ದಿನ ಎರಡು ಮೃತದೇಹವೂ ಪತ್ತೆಯಾಗಿದೆ. ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಮೃತದೇಹ ಬೆಳಕಿಗೆ ಬಂದಿದೆ.
ಕಾರು ಹೊಳೆಗೆ ಬಿದ್ದು, ಯುವಕರಿಬ್ಬರು ಕಣ್ಮರೆಯಾದ ಬಗ್ಗೆ ಹಲವಾರು ಗೊಂದಲಗಳು ಸೃಷ್ಟಿಯಾಗಿತ್ತು. ಆದರೇ ಇಂದು ಎರಡು ಮೃತದೇಹವೂ ಪತ್ತೆಯಾಗಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ತಮ್ಮ ಮಕ್ಕಳು ಎಲ್ಲಾದರೂ ಬದುಕಿರಬಹುದು ಎಂಬ ಕುಟುಂಬದವರ ಕನಸು ಕನಸಾಗಿಯೇ ಉಳಿದು ಹೋಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ..


























