ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ
ಸಂಬಂಧಿಸಿದಂತೆ ಬೆತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ
ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾದ ಬೆನ್ನಲ್ಲೇ, ಅರ್ಧ ಗಂಟೆಯ ಬಳಿಕ ಎರಡನೇ ಮೃತದೇಹವೂ ಪತ್ತೆಯಾಗಿದ್ದು, ಇದೀಗ ಎರಡು ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ.

ಇಂದು ಬೆಳಗ್ಗೆ ಬೈತಡ್ಕ ಸೇತುವೆಯಿಂದ 200 ಮೀಟರ್ ದೂರದ ಮರಕ್ಕಡ ಜೇಡರಕೇರಿ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು, ಅದರಿಂದ 50 ಮೀಟರ್ ಹಿಂದೆಯೇ ಎರಡನೇ ಮೃತದೇಹವೂ ಪತ್ತೆಯಾಗಿದ್ದು, ಎರಡು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಕಾರು ದುರಂತ ನಡೆದು ಮೂರನೇಯ ದಿನ ಎರಡು ಮೃತದೇಹವೂ ಪತ್ತೆಯಾಗಿದೆ. ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಮೃತದೇಹ ಬೆಳಕಿಗೆ ಬಂದಿದೆ.
ಮೃತದೇಹಗಳ ಗುರುತು ಪತ್ತೆಯಾಗಿದ್ದು, ಕುಂಡಡ್ಕ ಮೂಲದ ಧನುಷ್ ಮತ್ತು ಕನ್ಯಾನ ಮೂಲದ ಧನಂಜಯ ಎಂದು ಗುರುತಿಸಲಾಗಿದೆ. ಬೈತಡ್ಕ ಹೊಳೆಯಲ್ಲಿ ಸ್ನೇಹಿತರಿಬ್ಬರ ದುರಂತ ಅಂತ್ಯವಾಗಿದೆ.


























