ಪುತ್ತೂರು: ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್ಮ್ಯಾನ್ ಮೃತಪಟ್ಟ ಘಟನೆ ಕುಂಬ್ರ ಸಮೀಪದ ಪರ್ಪುಂಜದಲ್ಲಿ ಜು.12 ರಂದು ನಡೆದಿದೆ.

ಮೆಸ್ಕಾಂ ಕುಂಬ್ರ ಶಾಖೆಯ ಪವರ್ಮ್ಯಾನ್ ಬಸವರಾಜ್ (26)
ಮೃತಪಟ್ಟವರು.

ಬಸವರಾಜ್ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು, ಕೆಲವು ಸಮಯಗಳಿಂದ ಕುಂಬ್ರ ಮೆಸ್ಕಾಂನಲ್ಲಿ ನಿರ್ವಹಿಸುತ್ತಿದ್ದರು.


























