ವಿಟ್ಲ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಕರೋಪಾಡಿ ಗ್ರಾಮದ ಸಮ್ಮಡ್ಕ ಎಂಬಲ್ಲಿ ನಡೆದಿದೆ.

ಉಮ್ಮರ್ ಎಂಬವರಿಗೆ ಸೇರಿದ ಕರೋಪಾಡಿ ಗ್ರಾಮದ ಸಮ್ಮಡ್ಕದಲ್ಲಿರುವ ಅಂಗಡಿ ನಿನ್ನೆ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಘಟನೆಯಿಂದಾಗಿ ಸುಮಾರು 1 ಲಕ್ಷ ರೂ.ಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.



























