ಹಳೆಯಂಗಡಿ: ಪೋಸ್ಟ್ ಆಫೀಸ್ ಉದ್ಯೋಗಿಯೋರ್ವರು ಪಾವಂಜೆ ಸೇತುವೆಯಿಂದ ನದಿಗೆ ಹಾರಿ, ನಾಪತ್ತೆಯಾಗಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಮಂಡ್ಯ ಮೂಲದ ಪ್ರಸ್ತುತ ಮಂಗಳೂರಿನ ಪೋಸ್ಟ್ ಆಫೀಸಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಕೇಶ್ ಗೌಡ (26) ನಾಪತ್ತೆಯಾದ ವ್ಯಕ್ತಿ.

ನದಿಗೆ ಹಾರುವ ಮುನ್ನ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್‌ನಲ್ಲಿ ಇಟ್ಟಿದ್ದರು. ಅಲ್ಲದೆ ತಾನು ನದಿಗೆ ಹಾರುತ್ತಿರುವ ಕುರಿತು ಸಂಬಂಧಿಕರಿಗೆ ವಾಟ್ಸಪ್‌ನಲ್ಲಿ ಲೊಕೇಶನ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿದ್ದಾರೆ.

























