ಪುತ್ತೂರಿನ ಹೆಸರಾಂತ ವೈದ್ಯರಾದ ಡಾ. ಎಮ್.ಕೆ.ಪ್ರಸಾದ್ ರವರಿಗೆ ಪ್ರತಿಷ್ಠಿತ ಐ.ಎಮ್.ಎ, ಕೆ.ಎಸ್.ಬಿ ಡಾಕ್ಟರ್ಸ್ ಡೇ ಪ್ರಶಸ್ತಿಗೆ ಪುರಸ್ಕೃತರಾಗಿರುವ ಹಿನ್ನಲೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ದೇವರಿಗೆ ವಿಶೇಷ ಪ್ರಾರ್ಥನೆ ಮಾಡಿ, ಶ್ರೀದೇವರ ಪ್ರಸಾದ ನೀಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ಗೌರವಿಸಿದರು.




























