ಪುತ್ತೂರು: ಕಾಂಗ್ರೆಸ್ ವತಿಯಿಂದ ರೆಸ್ಕ್ಯೂ ( ಪ್ರಕೃತಿ ವಿಕೋಪ) ನಿರ್ವಹಣಾ ತಂಡವನ್ನು ಜು.12 ರಂದು ಉದ್ಘಾಟಿಸಲಾಯಿತು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪುತ್ತೂರು ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಕೃತಿ ವಿಕೋಪದಡಿಯಲ್ಲಿ ಯಾವುದೇ ಸಂದರ್ಭದಲ್ಲಿ ಈ ತಂಡ ಸದಾ ಸನ್ನದ್ಧವಾಗಿದ್ದು, ಆ ಮೂಲಕ ಸಮಾಜಕ್ಕೆ ಸೇವೆಯನ್ನು ನೀಡಲು ಮುಂದಾಗಿದೆ ಎಂದು ಹೇಳಿದರು. ಕೇವಲ ಫೋಸ್ ಕೊಡುವ ತಂಡದವರ ಹಾಗೆ ಆಗದೆ ಸಮಾಜಕ್ಕೆ ಸಹಾಯ ಸಹಕಾರ ನೀಡುವ ಮೂಲಕ ಕಾಂಗ್ರೆಸ್ ತಂಡ ಎಂದರೆ ಹೀಗಿರಬೇಕು ಎಂಬ ವಿಶ್ವಾಸ ಮೂಡಿಬರಬೇಕು ಎಂದರು. ಈ ತಂಡಕ್ಕೆ ಉತ್ತಮ ಕೆಲಸ ಮಾಡಲು ಮತ್ತು ಸಮಾಜಕ್ಕೆ ಹೆಚ್ಚಿನ ಸಹಾಯ ನೀಡಲು ದೇವರು ಅನುಗ್ರಹಿಸಲಿ ಎಂದು ಅವರು ಹೇಳಿದರು.

ಕಾಂಗ್ರೆಸ್ ರಕ್ಷಣಾ ತಂಡ ಪುತ್ತೂರು ಕಾಂಗ್ರೆಸ್ ರಕ್ಷಣಾ ತಂಡದಲ್ಲಿ ಕಾಂಗ್ರೆಸ್ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್, ಪುತ್ತೂರು ಎನ್‌ಎಸ್‌ಯುಐ ಅಧ್ಯಕ್ಷ ಚಿರಾಗ್ ರೈ, ಕಾಂಗ್ರೆಸ್ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕ , ಕಾಂಗ್ರೆಸ್ ಮುಖಂಡ ಸನತ್ ರೈ ಎಳ್ನಾಡುಗುತ್ತು, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಬ್ಲಾಕ್ ಕಾರ್ಯದರ್ಶಿ ಹಬೀಬ್ ಕಣ್ಣೂರು, ಕಾಂಗ್ರೆಸ್ ಯಂಗ್ ಬ್ರಿಗೇಡ್ ಶರೀಫ್ ಬಲ್ನಾಡು, ಎನ್‌ಎಸ್‌ಯುಇ ಪ್ರಧಾನ ಕಾರ್ಯದರ್ಶಿ ಎಡ್ವರ್ಡ್, ಜಿಲ್ಲಾ ಎನ್‌ಎಸ್‌ಯುಐ ಮುಖಂಡ ಬಾತೀಷ ಅಳಕೆಮಜಲು, ಉನೈಸ್ ಗಡಿಯಾರ್, ವಿಕ್ಟರ್ ಪಾಯಸ್, ಹನೀಫ್, ರಮೇಶ್, ಸುಹೈಲ್ ಮೊದಲಾದವರು ತುರ್ತು ಕಾರ್ಯನಿರ್ವಹಿಸಲಿದ್ದಾರೆ. ತಂಡದ ಸಹಾಯವಾಣಿ ಸಂಖ್ಯೆ 9901201139, 9481717322, 9900675420, 8762119527, 9880686992 ಸಂಪರ್ಕಿಸಬಹುದು.

