ಕಾಣಿಯೂರು: ಬೈತಡ್ಕ ಪರಿಸರದಲ್ಲಿ ಕಳೆದ ಎರಡು ದಿನಗಳ ಹಿಂದೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಈ ಬಗ್ಗೆ ಜುಮ್ಮಾ ಮಸೀದಿ ದರ್ಗಾ ಶರೀಫ್ ಬೈತಡ್ಕ ಆಡಳಿತ ಸಮಿತಿ ವತಿಯಿಂದ ಆ ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಬೆಳ್ಳಾರೆ ಆರಕ್ಷಕ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೈತಡ್ಕ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಉಪಾಧ್ಯಕ್ಷರಾದ ಇಟ್ಬಾಲ್ ಬೈತಡ್ಕ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಅಲೆಕ್ಕಾಡಿ, ಜೊತೆ ಕಾರ್ಯದರ್ಶಿ ಅಬ್ದುಲ್ಲ ಕೆಲಂಬಿರಿ, ಕೋಶಾಧಿಕಾರಿ ಸಾಬು ಹಾಜಿ, ಸಮಿತಿ ಸದಸ್ಯರಾದ ಮೊಹಮ್ಮದ್ ಅಲೆಕ್ಕಾಡಿ, ಅಬ್ದುರಹ್ಮಾನ್ ಸಮಹಾದಿ ಉಪಸ್ಥಿತರಿದ್ದರು.
























