ವಿಟ್ಲ: ಭಾರೀ ಗಾಳಿಗೆ ಮನೆಯ ಮೇಲೆ ತೆಂಗಿನ ಮರ ಬಿದ್ದ ಘಟನೆ ವಿಟ್ಲ ಸಮೀಪದ ಕಬ್ಬಿನ ಹಿತ್ತಿಲು ಎಂಬಲ್ಲಿ ನಡೆದಿದೆ.

ವಿಟ್ಲ ಸಮೀಪದ ಕಬ್ಬಿನ ಹಿತ್ತಿಲು ರಿಯಾ ಮಾರ್ಕ್ ವೇಗಸ್ ಎಂಬವರ ಮನೆ ಮೇಲೆ ಬೃಹತ್ ಗಾತ್ರದ ಎರಡು ತೆಂಗಿನ ಮರ ಬಿದ್ದಿದ್ದು, ಬಚ್ಚಲು ಮನೆಯ ಕಟ್ಟಡ ಸಂಪೂರ್ಣ ಹಾನಿಗೊಳಗಾಗಿದೆ.

ಘಟನೆ ಯಿಂದಾಗಿ ಅಪಾರ ಪ್ರಮಾಣ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.




























