ಪುತ್ತೂರು: ವಿವೇಕಾನಂದ ಶಿಶು ಮಂದಿರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ಆ.19 ರಂದು ನಡೆಯಲಿರುವ 24ನೇ ವರ್ಷದ ಶ್ರೀಕೃಷ್ಣಲೋಕ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯನ್ನು ಜು.14ರಂದು ವಿವೇಕಾನಂದ ಶಿಶು ಮಂದಿರದಲ್ಲಿ ನೆರವೇರಿಸಲಾಯಿತು.
ದ್ವಾರಕ ಕನ್ಸ್ಟ್ರಕ್ಷನ್ ಮ್ಹಾಲಕ ಗೋಪಾಲಕೃಷ್ಣ ಭಟ್ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕೃಷ್ಣ ಜನ್ಮಾಷ್ಠಮಿ ಸಮಿತಿ ಗೌರವಾಧ್ಯಕ್ಷೆ ರಾಜೀ ಬಲರಾಮ್, ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ, ಪ್ರಧಾನ ಕಾರ್ಯದರ್ಶಿ ಎಸ್.ದಾಮೋದರ ಪಾಟಾಳಿ, ಕೋಶಾಧಿಕಾರಿ ಗಿರೀಶ್ ಎಂ., ಜತೆ ಕಾರ್ಯದರ್ಶಿ ಗೌರಿ ಬನ್ನೂರು, ಆಡಳಿತ ಮಂಡಳಿ ಅಧ್ಯಕ್ಷ ರಾಜಗೋಪಾಲ ಭಟ್, ಸಂಚಾಲಕ ಅಕ್ಷಯ್ ಕುಮಾರ್ ಜಿ.ಎಸ್., ಸಮಿತಿ ಸದಸ್ಯರು, ಶಿಶುಮಂದಿರದ ಶಿಕ್ಷಕಿಯರು ಉಪಸ್ಥಿತರಿದ್ದರು.

























