ಪುತ್ತೂರು: ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಅವರ ಸಹೋದರ ನವೀನ್ ಚಂದ್ರ ( ಚಂದ್ರಪ್ಪ) (45) ರವರು ಅನಾರೋಗ್ಯದಿಂದಾಗಿ ಜು.14 ರಂದು ನಿಧನರಾದರು.

ಚಂದ್ರಪ್ಪ ರವರು ಬಸ್ ಎಜೆಂಟ್ ಆಗಿ ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪತ್ನಿ ಮಕ್ಕಳ ಸಮೇತರಾಗಿ ಮಂಗಳೂರಿನಲ್ಲೇ ವಾಸ್ತವ್ಯ ಹೊಂದಿದ್ದರು.
ಮೃತರು ತಾಯಿ,ಪತ್ನಿ, ಪುತ್ರ, ಪುತ್ರಿ, ಸಹೋದರರಾದ ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ, ಮತ್ತು ಇಲೆಕ್ಟ್ರಿಷಿಯನ್ ಕೆಲಸ ನಿರ್ವಹಿಸುತ್ತಿರುವ ಸುರೇಶ್ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಪುತ್ತೂರು ಹಿಂದೂ ರುದ್ರ ಭೂಮಿಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಸಹಿತ ಹಲವು ಗಣ್ಯರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

























