ವಿಟ್ಲ: ಆರಕ್ಷಕ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ವಿನೋದ್ ರೆಡ್ಡಿ ರವರು 2021ರ ಜೂನ್ ನಲ್ಲಿ ರಾಮನಗರ ಠಾಣೆಗೆ ವರ್ಗಾವಣೆಗೊಂಡಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಜೋಯಿಡ ರಾಮನಗರ ಠಾಣೆಯಿಂದ ಹಳಿಯಾಳ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

2017 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ವಿನೋದ್
ಎಸ್. ರೆಡ್ಡಿಯವರು ಆ ಬಳಿಕ ಮಂಗಳೂರು ಕೇಂದ್ರ ಸ್ಥಾನದಲ್ಲಿ
ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದರು. ಬಳಿಕ ಉಡುಪಿ ಜಿಲ್ಲೆಯ ಹೆಜಮಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರೊಬೆಷನರಿ ಎಸ್.ಐ ಆಗಿ ವರ್ಗಾವಣೆಗೊಂಡು ಬಂದಿದ್ದರು.
ವಿಟ್ಲ ಠಾಣಾ ಎಸ್ ಐ ಆಗಿದ್ದ ಯಲ್ಲಪ್ಪರವರ ವರ್ಗಾವಣೆಗೊಂಡ
ಬಳಿಕ ವಿನೋದ್ ಎಸ್. ರೆಡ್ಡಿ ರವರನ್ನು ವಿಟ್ಲ ಠಾಣೆಗೆ ವರ್ಗಾವಣೆ
ಮಾಡಲಾಗಿತ್ತು. 2021 ರಲ್ಲಿ ವಿಟ್ಲ ಠಾಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಜೋಯಿಡ ರಾಮನಗರ ಠಾಣೆಗೆ ವರ್ಗಾವಣೆಗೊಂಡಿದ್ದರು. ವಿನೋದ್ ಎಸ್. ರೆಡ್ಡಿ ರವರು ಮೂಲತಃ
ಬಾಗಲಕೋಟೆಯವರಾಗಿದ್ದು, ಮೆಕ್ಯಾನಿಕಲ್ ಇಂಜಿನಿಯರ್
ಆಗಿದ್ದಾರೆ.



























