ನಿವೃತ್ತ ಬ್ಯಾಂಕ್ ಮ್ಯಾನೇಜರ್, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿರುವ ವೀರಪ್ಪ ಅಂಬರ್ ಅವರ ಪತ್ನಿ, ಚಿತ್ರ ನಟ ಪೃಥ್ವಿ ಅಂಬರ್ ರವರ ತಾಯಿ ಸುಜಾತಾ ಅಂಬರ್ ರವರು ಜು.15 ರಂದು ನಿಧನರಾಗಿದ್ದಾರೆ.
ಕನ್ನಡದ ಹಿಟ್ ಚಿತ್ರಗಳ ಸಾಲಿನಲ್ಲಿ ಗುರುತಿಸಲ್ಪಡುವ ದಿಯಾ ಚಿತ್ರದ ನಾಯಕ ನಟನಾಗಿ ನಟಿಸಿದ್ದ ಪೃಥ್ವಿ ಅಂಬರ್ ರವರಿಗೆ ಮಾತೃವಿಯೋಗವಾಗಿದೆ.

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಸುಜಾತಾ ಅಂಬರ್ ರವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕನ್ನಡ ಹಾಗೂ ತುಳು ಚಲನಚಿತ್ರಗಳಲ್ಲಿ ಮಿಂಚುತ್ತಿರುವ ಪೃಥ್ವಿ ಅಂಬರ್ ಭರವಸೆಯ ಯುವನಟನಾಗಿ ಬೆಳೆಯುತ್ತಿದ್ದಾರೆ.

























