ಮಂಗಳೂರು: ಕೆಲವು ಶ್ರೀಮಂತ ವ್ಯಕ್ತಿಗಳು, ವ್ಯಾಪಾರಸ್ಥರ ದರೋಡೆಗೆ ಸಂಚು ಹೂಡುತ್ತಿದ್ದ ನಾಲ್ವರನ್ನು ನಗರದ ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುದ್ರೋಳಿ ಮಸೀದಿ ಹಿಂಭಾಗದ ಪರಿಸರಲ್ಲಿ ಶ್ರೀಮಂತರನ್ನು ದರೋಡೆಗೆ ಯತ್ನಿಸಿದ್ದ ಕುದ್ರೋಳಿ ನಿವಾಸಿ ಅನಿಶ್ ಅಶ್ರಫ್ ಮಾಯಾ (24), ಬಟ್ರಕೆರೆ ಬಜಪೆ ನಿವಾಸಿ ಶೇಖ್ ಮಹಮ್ಮದ್ ಹಾರಿಸ್ ಜಿಗರ್ (32) ಕಸಬ ಬೆಂಗ್ರೆ ನಿವಾಸಿ ಮಹಮ್ಮದ್ ಕೈಸ್ (26), ಕುದ್ರೋಳಿ ನಿವಾಸಿ ಮೊಹಮ್ಮದ್ ಕಾಮಿಲ್ (33) ಬಂಧಿತ ಆರೋಪಿಗಳು.
ಇನ್ನಿಬ್ಬರು ಆರೋಪಿಗಳಾದ ಚೋಟು ಮತ್ತು ಅಬ್ದುಲ್ ಖಾದರ್ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬಂದರು ಪೊಲೀಸರು ಜು. 14ರ ಮಧ್ಯಾಹ್ನ ಮೊಯಿದ್ದೀನ್ ಮಸೀದಿಯ ಹಿಂಭಾಗದ ಖಾಲಿ ಜಾಗಕ್ಕೆ ದಾಳಿ ನಡೆಸಿದ್ದು, ಅಲ್ಲಿ 6 ಜನ ಆರೋಪಿಗಳು, 3 ಮಾರಕಾಯುಧ ಇತ್ತು. ಇಬ್ಬರು ಪರಾರಿಯಾಗಿದ್ದಾರೆ.
ನಾಲ್ವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ನಾಲ್ವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ದರೋಡೆಗೆ ಸ್ಕೆಚ್ ರೂಪಿಸಿದ ನಾಲ್ವರು ಕೂಡ ರೌಡಿಶೀಟರ್‌ಗಳಾಗಿದ್ದು, ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


























