ವಿಟ್ಲ: ಬೆಳ್ಳಂಬೆಳಿಗ್ಗೆ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ವಿಟ್ಲದ ಕಾಶಿಮಠ ಎಂಬಲ್ಲಿ ಮರ ಬಿದ್ದು, ಕೆಲಹೊತ್ತು ಸಂಚಾರದಲ್ಲಿ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಬೆಳಿಗ್ಗೆ 5.30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಇದರಿಂದ ವಿಟ್ಲ-ಕಾಸರಗೋಡು, ಕನ್ಯಾನ, ಉಪ್ಪಳ ಕಡೆಗಳಿಗೆ ತೆರಳುವ ವಾಹನ ಸಾಲುಗಟ್ಟಿ ನಿಂತಿತ್ತು.

ಈ ಬಗ್ಗೆ ಮಾಹಿತಿ ಪಡೆದ ಯೋಗೀಶ ಮತ್ತು ದಯಾನಂದ
ಕಾಶಿಮಠ ರವರ ನೇತೃತ್ವದ ತಂಡ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು.





























