ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಪತ್ತೂರು ಹಾಗೂ ಮುರ ಹಿ.ಪ್ರಾ.ಶಾಲೆಯ ಆಶ್ರಯದಲ್ಲಿ ಪುತ್ತೂರು ಆಫೀಸರ್ ಕ್ಲಬ್‌ನಲ್ಲಿ ನಡೆದ ವಲಯ ಮಟ್ಟದ
ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಾಥಮಿಕ ಶಾಲಾ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು
ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ವಿದ್ಯಾರ್ಥಿಗಳಾದ ಗಗನ್‌ದೀಪ್ ಬಿ.ಎಮ್., ಪ್ರಥಮ್
ಕಶ್ಯಪ್ ಕೆ.ಬಿ., ಮನ್ವಿತ್ ಎ.ಎನ್., ನಿಧಿತ್ ಗೌಡ, ಬೃಂದಾ ಪಿ., ನಿಹಾನಿ ಮುತ್ಲಾಜೆ, ನಿಹಾರಿಕಾ ಪಿ.ರವರು ಭಾಗವಹಿಸಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸೆಲಿನ್ ಸಿಸ್ಟರ್ ತಿಳಿಸಿದ್ದಾರೆ.



























