ಬಂಟ್ವಾಳ: ಬಾರ್ಯ ಗ್ರಾಮದ ಗಿರೀಗುಡ್ಡೆ ನಿವಾಸಿ ಬೆಳ್ತಂಗಡಿ ಪದವಿ ವ್ಯಾಸಂಗ ನಡೆಸುತ್ತಿರುವ ಸುಮಂತ್ (20) ನಿಧನರಾದ ಸುದ್ದಿ ಎಲ್ಲಾ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡಿತ್ತು. ಅದರಲ್ಲೂ ಸುಮಂತ್ ಸಾಯುವ 5 ದಿವಸ ಮೊದಲು ತನ್ನ ವಾಟ್ಸಾಪ್ ನಲ್ಲಿ (ಹಿಂದುವಾಗಿ ಜನನ ಹಿಂದುವಾಗಿ ಮರಣ) ಅನ್ನುವ ಸ್ಟೇಟಸ್ ಹಾಕಿದ್ದು, ಅದರ ಸ್ಕ್ರೀನ್ ಶಾಟ್ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಬಗ್ಗೆ ಮಾಹಿತಿ ತಿಳಿದ ಬಜರಂಗದಳ ಬಂಟ್ವಾಳ ಪ್ರಖಂಡದ ಸದಸ್ಯರು, ಕಾರ್ಯಕರ್ತರು ಸೇರಿಕೊಂಡು ಹಿಂದೂಗಳ ಕಷ್ಟಕ್ಕೆ ಸ್ಪಂದಿಸುವ ‘ದಾನವೇ ಧರ್ಮದ ಮೂಲ’ ಎಂಬ ವಾಟ್ಸಾಪ್ ಗ್ರೂಪಿನ ಮೂಲಕ ಹಲವು ಕೊಡುಗೈ ದಾನಿಗಳ ಸಹಕಾರದೊಂದಿಗೆ 77000 ಹಣ ಒಟ್ಟುಗೂಡಿಸಿ ಸುಮಂತ್ ತಾಯಿಗೆ ಹಸ್ತಾಂತರ ಮಾಡಿದರು.

ದಾನವೇ ಧರ್ಮದ ಮೂಲ ಎಂಬ ವಾಟ್ಸಾಪ್ ಗ್ರೂಪ್ ಇವರೆಗೆ ಹಲವು ಕೊಡುಗೈ ದಾನಿಗಳ ಸಹಕಾರದಿಂದ ಒಟ್ಟು 5ಲಕ್ಷದವರೆಗೆ ಧನ ಸಹಾಯ ಮಾಡಿದೆ.
ವಿಶ್ವಹಿಂದುಪರಿಷದ್ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮುಡೆಲ್ ರವರು ಸುಮಂತ್ ತಾಯಿಯ ಕೈಗೆ ಹಣವನ್ನು ಹಸ್ತಾಂತರ ಮಾಡಿ ಇಡೀ ಹಿಂದೂ ಸಮಾಜ ಯಾವಾಗಲೂ ನಿಮ್ಮ ಜೊತೆ ಇರುತ್ತದೆ. ಅನ್ನೋ ಭರವಸೆ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಪ್ರಖಂಡದ ಸಂಚಾಲಕರಾದ ಶಿವ ಪ್ರಸಾದ್ ತುಂಬೆ, ಸಂತೋಷ್ ಕುಲಾಲ್ ಸರಪಾಡಿ, ಅಭಿನ್ ರೈ, ಪ್ರಸಾದ್ ಶಿವಾಜಿನಗರ ಬೆಂಜನಪದವು, ಪ್ರವೀಣ್ ಕುಲಾಲ್ ಕುಂಟಲಪಲ್ಕೆ, ಭಜರಂಗದಳ ಸರಪಾಡಿ ಖಂಡ ಸಮಿತಿಯ ಸದಸ್ಯರು, ದಾನವೇ ಧರ್ಮದ ಮೂಲ ಗ್ರೂಪಿನ ಸದಸ್ಯರು, ಬಾರ್ಯ ಸೇವಾ ಸಹಕಾರಿ ಸಂಘದ ಪ್ರಸನ್ನ ಗೌಡ, ಪ್ರಸಾದ್ ಗೌಡ ಬಾರ್ಯ ಉಪಸ್ಥಿತರಿದ್ದರು.



























