ಪುತ್ತೂರು: ಇತ್ತೀಚಿಗಷ್ಟೇ ದರ್ಬೆಯ ಸೋಜಾ ಲೇಔಟ್ ನ ಪ್ರಜ್ವಲ್ ಹೌಸ್ ನಲ್ಲಿ ಶುಭಾರಂಭಗೊಂಡಿರುವ “ಗಯ ಕಾಂಟಿನೆಂಟಲ್ ಕಿಚನ್” ಶಾಸಕರಾದ ಸಂಜೀವ ಮಠಂದೂರು ರವರು ಭೇಟಿ ನೀಡಿ ಶುಭ ಹಾರೈಸಿದರು.

ಇತ್ತೀಚಿಗಷ್ಟೇ ಶುಭಾರಂಭಗೊಂಡಿರುವ “ಗಯ ಕಾಂಟಿನೆಂಟಲ್ ಕಿಚನ್” ಗೆ ಭೇಟಿ ನೀಡಿದ ಶಾಸಕರು, ಮಳಿಗೆಯ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇನ್ನಷ್ಟು ಉನ್ನತವಾಗಿ ಸಂಸ್ಥೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗಯ ಕಿಚನ್ ನ ಮಾಲಕರಾದ ಪ್ರಜ್ವಲ್ ಹಾಗೂ ಅವರ ತಾಯಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.



























