ಪುತ್ತೂರು: ವ್ಯಕ್ತಿಯೋರ್ವರ ಮನೆಗೆ ತಡರಾತ್ರಿ ಅಕ್ರಮ ಪ್ರವೇಶ ಮಾಡಿ ಕತ್ತಿಯಿಂದ ಕಡಿದು ಗಂಭೀರ ಹಲ್ಲೆ ನಡೆಸಿದ ಘಟನೆ ಈಶ್ವರಮಂಗಲದ ಮೇನಾಲದಲ್ಲಿ ನಡೆದಿದೆ.
ಕೃಷ್ಣಪ್ಪ (52) ಹಲ್ಲೆಗೊಳಗಾದವರು. ಅವರು ಪುತ್ತೂರು ಸರಕಾರಿ
ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹಲ್ಲೆ ನಡೆಸಿದ ಆರೋಪಿ ಬಾಲಕೃಷ್ಣ ಎಂಬಾತನ ವಿರುದ್ಧ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಕೃಷ್ಣ ಎಂಬಾತ ಕೃಷ್ಣಪ್ಪ ಎಂಬವರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಇದ್ದು ಇವರ ಮನೆಯಿಂದಲೇ ಕೆಲಸಕ್ಕೆ ತೆರಳುತ್ತಿದ್ದ. ಕಳೆದ ಕೆಲವು ದಿನಗಳಿಂದ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದು ಇದನ್ನು ಕೃಷ್ಣಪ್ಪ ನವರು ಆಕ್ಷೇಪಿಸಿದ್ದರು. ಕುಡಿದು ಮನೆಗೆ ಬಾರದಂತೆ ತಿಳಿಸಿದ್ದರು. ಇದೇ ಕೋಪದಲ್ಲಿ ನನ್ನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾನೆ ಎಂದು ಕೃಷ್ಣಪ್ಪ ಆರೋಪಿಸಿದ್ದಾರೆ.
ಘಟನೆ ಯಿಂದಾಗಿ ಕೃಷ್ಣಪ್ಪ ರವರ ಕುತ್ತಿಗೆ, ಕೈಕಾಲುಗಳಿಗೆ
ಗಾಯಗಳಾಗಿದ್ದು, ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ..


























