ಪುತ್ತೂರು: ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡದಿಂದ ಮೊಟ್ಟೆತಡ್ಕ ಎನ್ ಆರ್ ಸಿ ಸಿ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದ್ವಾರದಿಂದ ದೇವಸ್ಥಾನದವರೆಗೆ ಹೋಗುವ ಮಾರ್ಗದ ಬದಿಯಲ್ಲಿರುವ ಹುಲ್ಲು ಹಾಗೂ ಕಂಪೌಂಡ್ ಸೈಡ್ ನಲ್ಲಿರುವ ಮರದ ಗೆಲ್ಲುಗಳನ್ನು ಕಡಿದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಎಂ.ಬಿ.ವಿಶ್ವನಾಥ ರೈ , ನಗರಸಭಾ ಸದಸ್ಯರಾದ ರಿಯಾಝ್ ಪರ್ಲಡ್ಕ , ಕಾರ್ಮಿಕ ಘಟಕದ ಅದ್ಯಕ್ಷರಾದ ಶರೂನ್ ಸಿಕ್ವೇರಾ ಅವರು ಸ್ವಚ್ಛತಾ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು.

ಸ್ವಚ್ಛತಾ ಕಾರ್ಯದಲ್ಲಿ ರೆಸ್ಕ್ಯೂ ತಂಡದವರಾದ , ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕ , ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಿಸ್ , ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು , ಎನ್ ಎಸ್ ಯುಐ ಜಿಲ್ಲಾ ಕಾರ್ಯದರ್ಶಿ ಬಾತಿಷಾ ಅಳಕೆಮಜಲು , ಎನ್ ಎಸ್ ಯುಐ ಅಧ್ಯಕ್ಷರಾದ ಚಿರಾಗ್ ರೈ , ಯಂಗ್ ಬ್ರೀಗ್ರೇಡ್ ಕೋಶಾಧಿಕಾರಿ ಶರೀಫ್ ಬಲ್ನಾಡ್ , ಬ್ಲಾಕ್ ಸೇವಾದಳ ಅಧ್ಯಕ್ಷರಾದ ವಿಶ್ವಜಿತ್ ಅಮ್ಮುಂಜ , ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸನತ್ ರೈ , ಎನ್ ಎಸ್ ಯುಐ ಪದಾಧಿಕಾರಿಗಳಾದ ಎಡ್ವರ್ಡ್ ಡಿ ಸೋಜಾ , ಸುಹೈಲ್ ಪುತ್ತೂರು , ಸುಹೈಲ್ ಕೂಡುರಸ್ತೆ , ರಮೇಶ್ ತಿಂಗಳಾಡಿ ಹಾಗು ಗ್ರಾ.ಪಂ.ಸದಸ್ಯರಾದ ನೇಮಾಕ್ಷ ಸುವರ್ಣ, ಸುಕುಮಾರ ಗೌಡ ಅಮ್ಮುಂಜ , ಪ್ರವೀಣ್ ಗೌಡ ಅಮ್ಮುಂಜ , ಹರೀಶ್ ಮಾದೇರಿ , ಹೊನ್ನಪ್ಪ ನಾಯ್ಕ , ರಿತೇಶ್ ಅಮ್ಮುಂಜ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



























