ಕೊಡಗು: ಕೊಡವರ ಕುಲದೇವಿ ಕೊಡಗಿನ ಆರಾಧ್ಯ ದೇವತೆ ಕಾವೇರಮ್ಮ ಮತ್ತು ಕೊಡವ ಸಮುದಾಯದ ಹೆಣ್ಣು ಮಕ್ಕಳನ್ನು ಮುಸ್ಲಿಂ ಯುವಕನೋರ್ವನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಮಾನ ಮಾಡಿ ತುಚ್ಛವಾಗಿ ಪೋಸ್ಟ್ ಹಾಕಿದ ಯುವಕನೋರ್ವನನ್ನು ಕೊಡಗಿನ ಪೊಲೀಸರು ಬಂಧಿಸಿದ್ದಾರೆ.
ಫೇಸ್ ಬುಕ್ ಫೇಕ್ ಅಕೌಂಟ್ ಸೃಷ್ಟಿ ಮಾಡಿದ್ದು, ಮುಸ್ಲಿಮನಲ್ಲದ ಯುವಕ ಎಂದು ತಿಳಿದು ಬಂದಿದೆ.

ಸಿದ್ದಾಪುರದ ಯುವಕ ಮೊಹಮದ್ ಅಷ್ಫಾಕ್ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ತಾಯಿ ಕಾವೇರಿ ಮತ್ತು ಕೊಡವ ಹೆಣ್ಣು ಮಕ್ಕಳ ಬಗ್ಗೆ ಪೋಸ್ಟ್ ವೈರಲ್ ಆದ ನಂತರ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತಗೊಂಡು ಪ್ರತಿಭಟನೆಯ ಹಾದಿ ಮತ್ತು ನೈಜ ಅಪರಾಧಿಯನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.
ಕೊಡಗಿನ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಫೇಸ್ ಬುಕ್ ಮುಂಬೈ ಕಚೇರಿ ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿ ಸಂಪರ್ಕಿಸಿ ನೈಜ ಅಪರಾಧಿಯನ್ನು ಬಂಧಿಸಿದ್ದಾರೆ.
ಅಪರಾಧಿ ಯುವಕ ವಿರಾಜಪೇಟೆ ಪಾಲಂಗಾಲ ನಿವಾಸಿ ಕೆ ಸಿ ದಿವಿನ್ ದೇವಯ್ಯ ಎನ್ನಲಾಗಿದೆ. ಈತ ಮುಸ್ಲಿಂ ಯುವಕನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.



























