ಪುತ್ತೂರು: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಚೇತನ ಫೌಂಡೇಶನ್ ಕರ್ನಾಟಕ (ರಿ) ಇದರ ಸಹಯೋಗದಲ್ಲಿ ಕನಕ ಭವನ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ ಧಾರವಾಡ ನುಡಿ ಸಡಗರ ಸಮಾವೇಶದಲ್ಲಿ ಯುವ ಸಾಹಿತಿ, ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ರವರಿಗೆ ಕರುನಾಡ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಯನ್ನು ಪ್ರೊ ಕೆ.ಬಿ ಗುಡಸಿ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನದ ಮುಖ್ಯಸ್ಥರಾದ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ರವರು ನೀಡಿದರು.
ಕಾರ್ಯಕ್ರಮದಲ್ಲಿ ಯುವ ನಟ, ನಿರ್ದೇಶಕ ನಿಂಗರಾಜು ಸಿಂಗಾಡಿ, ಚೇತನ ಫೌಂಡೇಶನ ಕರ್ನಾಟಕ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.


























