ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಮತ್ತು ತಾಲೂಕಿಗೆ ಪ್ರಥಮ ರ‍್ಯಾಂಕ್ ಪಡೆದ ರೋಟರಿಪುರ ನಿವಾಸಿ ಮಾನ್ವಿತಾ ರನ್ನು ಅಭಿರಾಮ್ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ ಜಯರಾಮ ರೈ, ಚಂದ್ರಹಾಸ ರೈ ಜಿಡೆಕಲ್ಲು, ಅಭಿರಾಮ್ ಫ್ರೆಂಡ್ಸ್ ನ ಅಧ್ಯಕ್ಷ ತೇಜ ಕುಮಾರ್ ಕೆಮ್ಮಾಯಿ, ಉಪಾಧ್ಯಕ್ಷ ಪ್ರಜೀತ್ ಕುಮಾರ್ ಮಂಜಲಡ್ಪು, ಪ್ರಧಾನ ಕಾರ್ಯದರ್ಶಿ ಸನತ್ ಸುವರ್ಣ, ಸದಸ್ಯರಾದ ಶರತ್ ಕೇಪುಳು, ರಾಜೇಶ್ ರಾಗಿದ ಕುಮೇರ್, ಕಿಶೋರ್ ತಾರಿಗುಡ್ಡೆ, ಅವಿನಾಶ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಚಿದಾನಂದ ಕೇಪುಳು, ಜಯೇಶ್ ಭಂಡಾರಿ, ಅಭಿಷೇಕ್ ಪಾದೆ ಮತ್ತಿತರು ಉಪಸ್ಥಿತರಿದ್ದರು.
ರೋಟರಿಪುರ ನಿವಾಸಿ ಸತೀಶ್ ಸುವರ್ಣ ಮತ್ತು ರೇಖಾ ದಂಪತಿಗಳ ಪುತ್ರಿಯಾದ ಮನ್ವಿತಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 593(98.83%) ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಮತ್ತು ತಾಲೂಕಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

























