ಪುತ್ತೂರು: ನಿಯಂತ್ರಣ ತಪ್ಪಿದ ಮಿನಿ ಟೆಂಪೋವೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಅಮ್ಚಿನಡ್ಕ ಮಸೀದಿಯ ಮುಂಭಾಗದಲ್ಲಿ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಮಿನಿ ಟೆಂಪೋ ಬ್ರೇಕ್ ಸಿಗದ ಹಿನ್ನೆಲೆ ನಿಯಂತ್ರಣ ತಪ್ಪಿ ಅಮ್ಚಿನಡ್ಕದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಷ್ಟೇ ಅಲ್ಲದೇ ವ್ಯಕ್ತಿಯೋರ್ವನಿಗೂ ಡಿಕ್ಕಿಯಾಗಿದ್ದು, ಗಾಯಗೊಂಡ ಆತ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ಅಪಘಾತದಿಂದಾಗಿ ವಿದ್ಯುತ್ ಕಂಬಕ್ಕೂ ಹಾನಿಯಾಗಿದ್ದು, ಮಿನಿ ಟೆಂಪೋಗೆ ಸಂಬಂಧಪಟ್ಟ ಸಂಸ್ಥೆಯವರು ಆಗಮಿಸಿ ವಿದ್ಯುತ್ ಕಂಬ ದುರಸ್ತಿಗೆ ತಗುಲಿದ ವೆಚ್ಚ ಹಾಗೂ ಲಾರಿ ಡಿಕ್ಕಿಯಾಗಿ ಆಸ್ಪತ್ರೆ ದಾಖಲಾದ ವ್ಯಕ್ತಿಯ ಆಸ್ಪತ್ರೆಯ ಖರ್ಚಿನ ವೆಚ್ಚವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.


























