ಪುತ್ತೂರು: ಹೆಬ್ಬಾರಬೈಲು ನಿವಾಸಿ, ಬಿಜಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಚಂದ್ರಶೇಖರ್ ಹೆಚ್.ಎನ್ (53)ರವರು ಜು.19 ರಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಚಂದ್ರಶೇಖರ್ ಹೆಚ್.ಎನ್ ರವರು ಹೆಚ್.ನಾರಾಯಣ್ ಆಂಡ್ ಸನ್ಸ್ ಜವುಳಿ ಸಂಸ್ಥೆಯ ಮಾಲಕರಾಗಿದ್ದ ದಿ.ಹೆಚ್.ನಾರಾಯಣ್ ಅವರ ಪುತ್ರರಾಗಿದ್ದು, ಹಲವು ವರ್ಷಗಳಿಂದ ಬಿಜಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದರು.

ಕೋವಿಡ್ ಸಂದರ್ಭದಲ್ಲಿ ಎದುರಾದ ಲಾಕ್‌ಡೌನ್‌ನಿಂದ ಪುತ್ತೂರಿಗೆ ಮರಳಿದ ಬಳಿಕ ಮತ್ತೆ ಬಿಜಾಪುರಕ್ಕೆ ತೆರಳದೆ ಪುತ್ತೂರಿನಲ್ಲಿಯೇ ಇದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ರೂಪಾ, ಪುತ್ರ ಅನೀಶ್, ಪುತ್ರಿ ಅನನ್ಯ ಸಹೋದರರಾದ ಮಾಜಿ ಪುರಸಭೆ ಉಪಾಧ್ಯಕ್ಷ ಹೆಚ್.ಉದಯ ಮತ್ತು ತಾರನಾಥ ರನ್ನು ಅಗಲಿದ್ದಾರೆ.
ಚಂದ್ರಶೇಖರ್ ಹೆಚ್.ಎನ್ ಅವರ ಮೃತದೇಹವನ್ನು ಮಂಗಳೂರು
ಅಸ್ಪತ್ರೆಯಲ್ಲಿ ಇರಿಸಲಾಗಿದ್ದು, ಜು.20 ರಂದು ಪುತ್ತೂರಿಗೆ ಕರೆತರಲಾಗುವುದು. ಬಳಿಕ ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ
ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿವೆ.


























